®
ನೃಪತುಂಗ ಕನ್ನಡ ಕೂಟ
Nrupathunga Kannada Koota
Kannada Community of Greater Atlanta Area, A non-profit organization under IRS 501 c(3)
There are 3 Kannada Kali Shaale's in Atlanta
1 - Kasturi Kannada Shaale - Marietta
2 - Kannada Class - Lawrenceville – via SKYPE
3 - Kasturi Kannada Shaale - Cumming
1 - 'Marietta Kasturi Kannada shaale'
conducts Kannada classes every week, during the school year.
When? - Every Saturday at 4.30pm
Where? - Online and in person class at residence in Marietta
Details? How do I enroll?
Call Vanishree Rao on 770-843-8989, for details and enrollment
Format
We have 3 levels depending on the level of the student:
1st level: Kids learn from 'a' to 'aha' of Kannada alphabets. We also focus on encouraging the kids to talk in Kannada, words for animals, vegetables, colors, body parts, fruits etc. Stories are also told in Kannada to improve Kannada vocabulary.
2nd level: Kids learn alphabets 'ka' to 'La' and read small words, They get an introduction to 'Kannada-kaagunita'. They also learn conversational skills along with advanced vocabulary.
3rd level: Kids learn kaagunita, ottaskshara and reading/writing in kannada. They learn, kannada proverbs, riddles and do projects on Karnataka/authors and learn our history.
ನಮ್ಮ ಶಾಲೆಯಲ್ಲಿ ಕಲಿಕೆಯನ್ನು ಮೂರು ಹಂತಗಳಾಗಿ ವಿಂಗಡಿಸಿದ್ದೇವೆ:
೧. ಆರಂಭಿಕ ಹಂತ - ಪುಟ್ಟ ಮ್ಕಕಳಿಗೆ ಬಾಯಿಪಾಠ, ಹಣ್ಣು, ತರಕಾರಿ, ಅಕ್ಷರಮಾಲೆ, ದೇಹದ ಅಂಗಾಂಗಗಳು, ಕಥೆಗಳು, ಹಾಡುಗಳು... ಹೇಗೆ ಹಲವಾರನ ಆಟಗಳಿಂದ ಪಾಠಹೇಳಿಕೊಡುತ್ತೇವೆ.
(ಶಿಕ್ಷಕಿ - ಮಂಗಳಾ ಉಡುಪ, ಪುಟ್ಟ ಮಕ್ಕಳ ಜೊತೆ ಮಗುವಾಗಿ ಮಕ್ಕಳ ಮನ ಗೆದ್ದಿರುವ ಮಂಗಳಾ ಆಂಟಿ!)
೨. ಮಧ್ಯಮ ಹಂತ - ಅಕ್ಷರಮಾಲೆ ಬರೆಯುವುದು, ಓದುವುದು, ಸುಲಭವಾದ ಪದಗಳನ್ನು ರಚಿಸನವುದು, ಮಾತನಾಡುವ ಕನ್ನಡ, ಕಾಗುಣಿತ, ಸ್ವರ-ವ್ಯಂಜನ ಇತ್ಯಾದಿ
(ಶಿಕ್ಷಕರು - ನಾಗಲಕ್ಷ್ಮಿ ಇನಾಂದಾರ್ ಮತ್ತು ದೀಪಾ ದೇಸಾಯಿ. ಊಟಕ್ಕೆ ಉಪ್ಪಿನಕಾಯಿ ಇದ್ದ ಹಾಗೆ ಕನ್ನಡ ಶಾಲೆಗೇ ನಾಗು ಆಂಟಿ ಕಥೆಗಳು ಬೇಕೇ ಬೇಕು! ದೀಪಾ ನಮ್ಮ ಶಾಲೆಗೇ ಉತ್ಸಾಹದಿಂದ ಕನ್ನಡ ಕಲಿಸಲು ಹೊಸದಾಗಿ ಸೇರಿದ್ದಾರೆ)
೩. ಮುಂದುವರೆದ ಹಂತ: ಕಾಗುಣಿತ, ಒತ್ತಕ್ಷರ, ಓದುವುದು, ಬರೆಯುವುದು, ಕಲಿತಿರುವುದನ್ನು ಎಲ್ಲರ ಜೊತೆ ಹಂಚಿಕೊಳ್ಳುವುದು, ಗಾದೆಗಳ ಬಳಕೆ,ಮೋಜಿನ ಒಗಟುಗಳ ಕಲಿಕೆ, ಭಾಷೆ ಹಾಗೂ ನಾಡನ ಪರಿಚಯ
(ಶಿಕ್ಷಕಿ - ವಾಣಿಶ್ರೀ ರಾವ್ - ಹಲವಾರು ಚಟುವಟಿಕೆಗಳಿಂದ ಕನ್ನಡ ಕಲಿಯುತ್ತೇವೆ)
ಸಣ್ಣ ಸಣ್ಣ projects'ಗಳ ಮುಖಾಂತರ, ನಮ್ಮ ರಾಜ್ಯ ಮತ್ತು ಭಾಷೆಯ ಬಗ್ಗೆ, ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳ ಪರಿಚಯ ಮಾಡಿಸುತ್ತೇವೆ. ಮಕ್ಕಳು ಕರ್ನಾಟಕದಲ್ಲಿ ನೋಡಿರುವ ಸ್ಥಳಗಳ ಬಗ್ಗೆ ಬರೆದು, ಅದನ್ನು ಅವರ ಸ್ನೇಹಿತರ ಜೊತೆಗೆ ಹಂಚಿಕೊಳ್ಳುತ್ತಾರೆ. ಕರ್ನಾಟಕದಲ್ಲಿ ಬದುಕಿ-ಬಾಳಿದ ಒನಕೆ ಓಬವ್ವ, ಕಿತ್ತೂರು ಚೆನ್ನಮ್ಮ, ಮೈಸೂರು ಒಡೆಯರ್, ವಿಶ್ವೇಶ್ವರಯ್ಯ ಮತ್ತು ಇನ್ನೂ ಹಲವರ ಸಾಧನೆಯ ಬಗ್ಗೆ ಕಲಿಯುತ್ತೇವೆ.
ಕನ್ನಡ ಸಂಗೀತ-ಸಾಹಿತ್ಯಕ್ಕೆ ಹೆಸರುವಾಸಿಯಾದ ಪುರಂದರದಾಸರು, ಕನಕದಾಸರು, ಬಸವಣ್ಣ, ಅಕ್ಕಮಹಾದೇವಿಯವರ ಬಗ್ಗೆ ತಿಳಿಸಲಾಗುತ್ತದ್ದೆ. ಕನ್ನಡದ ಗಾದೆಗಳು, ಒಗಟುಗಳನ್ನು ಕಲಿಯಲು ಮಕ್ಕಳು ತುಂಬಾ ಆಸಕ್ತಿ ತೋರಿಸುತ್ತಾರೆ. ಪ್ರತಿಯೊಂದು ಮಗುವಿಗೂ ನಾವು ಕನ್ನಡ ಪುಸ್ತಕವನ್ನು ಉಚಿತವಾಗಿ ಕೊಡುತ್ತೇವೆ.
2 - Kannada Class @ Lawrenceville – via SKYPE
Every Thursday Evening:
Level 2: 7:30 pm - 8:00 pm
Level 1: 8:05 pm - 8:35 pm
For more information, contact Pradeep Vittalamurthy @ 678-656-4076 / pradeep16@hotmail.com
3 - Kasturi Kannada Shaale - Cumming
Kasturi Kannada Shaale - Cumming is a non-profit, volunteers run Kannada school. Our aspiration is to help kids of Kannada speaking community to learn and converse in Kannada. A highly dedicated and motivated volunteer teachers conduct classes every week according to Forsyth County Calendar
When? - Every Sunday 2 batches - @3:00pm and 4:30pm
Where? - 5480 McGinnis Ferry Pl, Alpharetta, GA, 30005
Details? How do I enroll?
Send an email to kkscumming@gmail.com and we will reach out to you.
Format
Our school follows Kannada Kali material that is written by Shiva Gowder from California and published by Kannada Abhivruddhi Praadhikaara, Bengaluru.
There are set of 8 books: (https://kannadapraadhikaara.karnataka.gov.in/info-4/KDA/kn)
Swara Balla 1 & 2
Akshara Balla 1 & 2
Pada Balla 1 & 2
Jaana 1 & 2
Books are provided in classes.
This curriculum is used in over 15 states and 30 centers in US, England (5 centers), Australia etc., which helps anyone moving to a different state to continue same curriculum.
Teaching methodology is aligned with how a second language is learnt by building vocabulary through words, word phrases, rules for sentences, poems - stories, reading - writing - all in parallel.
All students are grouped close to their school grade level and start with Swara Balla -1 and progress to Jaana 2. 15 teachers, between two batches, guide the classes.
ಕಲಿಸುವ ದಾಟಿ
ಕ್ಯಾಲಿಫೋರ್ನಿಯಾದ ಶಿವ ಗೌಡೆರ್ ಬರೆದು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಪ್ರಕಟಿಸಿರುವ ಪುಸ್ತಕಗಳನ್ನು ಬಳಸಿ ಕನ್ನಡ ನುಡಿಯನ್ನು ಕಲಿಸುತ್ತೇವೆ.
ಕೆಳಗೆ ತೋರಿಸಿರುವ ಎಂಟು ಹಂತಗಳಲ್ಲಿ, ಪದ / ಪದ ಜೋಡಣೆ / ಮಾತು - ಅದರ ನಿಯಮಗಳು / ಪದ್ಯ - ಕಥೆ / ಓದು - ಬರಹ - ಎಲ್ಲವನ್ನೂ ಜೊತೆ ಜೊತೆಯಾಗಿ ಕಲಿಯುತ್ತಾರೆ. ಕರ್ನಾಟಕ ನಾಡು - ಇತಿಹಾಸ, ಕವಿಗಳ ಪರಿಚಯ ಜಾಣ ೧/೨ ರಲ್ಲಿ ಆಗುತ್ತದೆ.
ಸ್ವರ ಬಲ್ಲ ೧ / ೨
ಅಕ್ಷರ ಬಲ್ಲ ೧ / ೨
ಪದ ಬಲ್ಲ ೧ / ೨
ಜಾಣ ೧ / ೨
ಈ ಪುಸ್ತಕಗಳನ್ನು ಈಗಾಗಲೇ ಅಮೇರಿಕಾದ ೧೫ಕ್ಕೂ ಹೆಚ್ಚು ರಾಜ್ಯಗಳಲ್ಲಿ - ೩೦ಕ್ಕೂ ಹೆಚ್ಚು ಶಾಲೆಗಳಲ್ಲೂ, ಇಂಗ್ಲೆಂಡ್ , ಆಸ್ಟ್ರೇಲಿಯಾ ದೇಶಗಲ್ಲೂ ಅಳವಡಿಸಿಕೊಳ್ಳಲಾಗಿದೆ.